
ನಾಲ್ಕೂ ದಿಕ್ಕನ್ನೂ ತುಂಬಿದ ಪುಟ್ಟ
ಹೂ ನಗೆ ಮನೆಯ ಬೆಳಗಿದ ಕಣ್ಣಕಾಂತಿ
ಹೊರಟು ನಿಂತಿದೆ
ಹೂ ನಗೆ ಮನೆಯ ಬೆಳಗಿದ ಕಣ್ಣಕಾಂತಿ
ಹೊರಟು ನಿಂತಿದೆ
ನಾವೆಲ್ಲ ಕಣ್ಣೀರಿಗೆ ದತ್ತು .
ನಿನ್ನೆ-ಮೊನ್ನೆಯ ಮಾತು,
ಬಲಿಯದ ಪಾದಗಳ ಗುಲಾಬಿಯಂದ
ಒಲಿದೊಲಿದು ಬಿದ್ದು
ಸೋತು ಕಣ್ತುಂಬಿ ಅತ್ತಕ್ಷಣ
ಮುತ್ತಕೊಟ್ಟು,ಹೆಜ್ಜೆಗೊಂದು ಗೆಜ್ಜೆಯಿಟ್ಟು
ಕಿರು ಬೆರಳಿಗೊಂದು ಹಿರಿಬೆರಳನಿತ್ತು
ನಡೆದಿದ್ದೆವು ದಾರಿಹೊರಳುವತ್ತ.
ಕವಲೊಡೆದ ಕುಡಿಯ ಒಂಟಿಪಯಣವೆ
ಕಣ್ಣ ಮುತ್ತಾಗಿ ಸಾಗಿಹೋಗುತಿದೆ.
ಹೊಸ ಸಂಸಾರದ ಒಂಟಿತನಕ್ಕೆ
ಬಂದಿದ್ದಳವಳು ಆಟದ ಗೊಂಬೆಯಂತೆ.
ಸಾಕ್ಷಾತ್ಕರಿಸಿದ ಸ್ವಪ್ನವಾಗಿ.
ಅವಳೊಂದೊಂದು ಹಠ,ನನಗೊಂದೊಂದು ಆಟ.
ಹೊರಟಿದ್ದಾಳವಳು ಹೊಸ ಒಡನಾಟಕ್ಕೆ.!
ಅಳುತ್ತಳುತ್ತಲೇ ರಾಗವಾದವಳು,
ತೊದಲಿ ತೊದಲಿ ದನಿಯಾದಳು.
ಪಿಸುಮಾತೂ ಹೊಸ ಹೊಸ ಪದಕೋಶ
ಆಡದ ಮಾತಿಲ್ಲ, ಹಾಡದ ಹಾಡಿಲ್ಲ.
ಕಣ್ಣು ತುಂಬಿದ್ದಾಳವಳು ಮಾತೇ ಮರೆತಂತೆ.!
ಅಕ್ಷರ ಕಲಿವ ಮೊದಲೇ ಮಹಾಸಾಕ್ಷರಿಯವಳು.
ಗೀಚಿದ ಗೋಡೆಚಿತ್ತಾರದ ಗೆರೆ ಮಾಸಿಲ್ಲ,ಹಸಿಯಾರಿಲ್ಲ
ಉಸಿರ ಉಸಿರಾಗಿ ಬೆರೆತು ಬಿಟ್ಟವಳು
ಹೊರಟು ನಿಂತಿದ್ದಾಳೆ ಕಾಲವೇ ನಿಂತುಬಿಟ್ಟಂತೆ
ರಾಶೀ ಚೊಲೊ ಇದ್ದು.. its for every daughter.. beautiful.
ReplyDeletethumba chennagide anta nanaganisthu,
ReplyDelete@Niveditha
ReplyDeleteThanks..
@ namana
Thank you.. ನಿಮಗೆ ಇಷ್ಟ ಆಗಿದ್ದು ಖುಷಿಯಾಯ್ತು... ಮತ್ತೆ ಮತ್ತೆ ಬನ್ನಿ.
payana nirantara.....
ReplyDeletetumba gaadhavaagide. I think continuity is very important....
Shailaja Gornmane andre neevena? :)
classic one !!!
ReplyDelete@jagali bhaagavata
ReplyDeleteHaudu.. Shailaja goranmane andre naane.nimma pratikriyege dhanyavaadagalu.
@satish
Thanks..
೨೪ ವರ್ಷಗಳ ಸುಖೀ ದಾಂಪತ್ಯ ಜೀವನ ನಡೆಸಿದ್ದಕ್ಕೆ ಅಭಿನಂದನೆಗಳು.
ReplyDelete..ಮತ್ತೆ, ಇದೇ ಖುಷಿಯಲ್ಲಿ ಓದುಗರಿಗೆ ಒಂದು ಮಸಾಲೆ ದೋಸೆ ಪಾರ್ಟಿನೂ ಇಲ್ವಾ?ಃ)
ಶೈಲಜಕ್ಕನಿಗೆ .ವಂದನೆಗಳು
ReplyDeleteತಮ್ಮ ಪ್ರಯತ್ನದ ಫಲವಾಗಿ ಪ್ರ್ಕಕಟಿತವಾದ ದಿ-ವಿ-ತಿ-ಶೀಗೆಹಳ್ಳೀಯವರ ಕಾದಂಭರಿ ತಲೆಗಳಿ ಒದಿರುವೆ ಅಭಿನ್ಂದನೆಗಳು.