Saturday, April 4, 2009

ಅಸಂಗತ

ಯಾರೂ ತುಳಿದ ಪಯಣವಿದಲ್ಲ. ಆದರೆ ನಡೆದ ದಾರಿಯ ಹೆಜ್ಜೆ ಗುರುತುಗಳನ್ನ ಊರಲು ಎಲ್ಲರಿಗೂ ಆಸ್ಪದವಿರುವದಿಲ್ಲ. ಆ ಅವಕಾಶ ನನಗೆ ಸಿಕ್ಕಿದೆ. ಸಾವಕಾಶವಾಗಿ ನಿಮ್ಮೆದುರು ತೆರೆದಿಡುವ ಮಾತುಗಳೆಲ್ಲ ಸುಸಂಬದ್ದವೇ ಆಗಿಬಿಡುವ ಸಾದ್ಯತೆಗಳ ಬಗ್ಗೆ ಯೋಚಿಸಿಲ್ಲ. ಪುರುಸೊತ್ತಾಗಿ ಕುಳಿತು ಹರಟುವ ಉಮೇದಿನಲ್ಲಿ ಮೌನ ಮಾತಾಗಿ ಹರಿಯಲೆಂಬ ಬಯಕೆ...... ಹೊಸದಾಗಿ ಆರಂಭಿಸಿರುವ ಈ ಮಾತಿನ ಮನೆಯನ್ನ ಒಂದಿಷ್ಟು ಅಲಂಕರಿಸೋಣ ವೆಂದುಕೊಂಡೆ. ಮರುಕ್ಷಣವೇ ಒಂದಿಷ್ಟು ಅವಕಾಶವನ್ನು ಇಲ್ಲಿ ಹಾದು ಹೋಗುವವರಿಗೂ ಕಲ್ಪಿಸಿ ನೋಡೋಣವೆನ್ನಿಸಿದೆ. ಆಡಿದಷ್ಟೂ ಮುಗಿಯದ ಮೌನಕ್ಕೆ ಶರಣಾಗಿಯಾಗಿದೆ.ಇದೇದಾರಿ, ಹೀಗೇ ಹೋಗಬೇಕೆಂಬ ನಿರ್ದಿಷ್ಟತೆ ಕಾಡದು. ದಾರಿತೆರೆದಂತೇ ಗಮ್ಯ ಹುಡುಕುವ ಮನಸು.ನಿಮ್ಮ ಅಭಿಪ್ರಾಯವೂ ನನ್ನೀ ಅರಮನೆಗೆ ಒಂದು ಆವರಣವನ್ನು ನೀಡುತ್ತದೆಂಬ ಭರವಸೆ ಇದೆ. ಈ ಹೊಸಪಯಣದ ಜೊತೆಗಾರರ ನಿರೀಕ್ಷೆ ಹಾಗೂ ಜೊತೆಗೂಡುವ ಹೆಜ್ಜೆ ಕೊಡುವ ಹೊಸ ಅನುಭವದ ಬಗ್ಗೆ ಕುತೂಹಲವಿದೆ. ನೂರೆಂಟು ಅಸಂಗತಗಳ ನಡುವೆ ಬ್ಲಾಗ್ಪಯಣದಾರಂಭವಿಟ್ಟುಕೊಂಡಿದ್ದೇನೆ. ನಾವು ಮತ್ತು ನೀವು ಕೂಡಿ ಹೋಗಬೇಕಾದ ಹಾದಿಯ ನಡುವೆ ಅರೆಕ್ಷಣ ದಯವಿಟ್ಟು ಬನ್ನಿ.ನಿಮ್ಮ ಸ್ನೇಹದಿಂದ ಚಂದಗಾಣಿಸಿಕೊಡಿ. ನಾವೆಲ್ಲ ಸೇರಿ ಸಾಗೋಣ ಆಗದಾ? -ವಂದನೆಗಳೊಂದಿಗೆ. ಶೈಲಜ

1 comment:

  1. ಆಗಲಿ. ಒಟ್ಟಿಗೆ ಸಾಗುವ. ನೀವು ಓದುಗ ದೊರೆಗಳನ್ನ ಅನಾಥರನ್ನಾಗಿಸದಿದ್ದರೆ...ನೀವು ಮುಂದೆ ಮುಂದೆ...ನಾವು ನಿಮ್ಮ ಹಿಂದೆ ಹಿಂದೆ....

    ReplyDelete